ಪ್ರೀತಿಯ ಸಹೋದ್ಯೋಗಿಗಳೆ,
ಸಾಂಸ್ಥಿಕ ಮೌಲ್ಯಗಳು ಕಂಪನಿಯ ಅಂತರಾಳವಾಗಿರುತ್ತವೆ ಮತ್ತು ನಮ್ಮ ಆಲೋಚನೆಗಳು ಮತ್ತು ಕಾರ್ಯಗಳಿಗೆ ಮಾರ್ಗದರ್ಶನವನ್ನು ನೀಡಬೇಕು. ಹಾಗಾಗಿ ಕರ್ನ್ ಲಿಬರ್ಸ್ ನಿಮ್ಮ ಮೌಲ್ಯಗಳನ್ನು ಗಣನೆಗೆ ತೆಗೆದುಕೊಂಡು ಕಂಪನಿಯ ಮೌಲ್ಯಗಳನ್ನು ನಿರ್ಧರಿಸಲು ಇಚ್ಚಿಸುತ್ತದೆ.
ನೀವು ಈ ಸಮೀಕ್ಷೆಯಲ್ಲಿ ಭಾಗವಹಿಸಲು ನಿಮ್ಮನ್ನು ಕೋರುತ್ತೇವೆ. ಈ ಸಮೀಕ್ಷೆಯು ಅನಾಮಧೇಯವಾಗಿದ್ದು 10-15 ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ.
ಈ ಸಮೀಕ್ಷೆಯಲ್ಲಿ ನಿಮ್ಮ ಪಾತ್ರವು ಬಹಳ ಮಹತ್ವವಾಗಿದ್ದು ನಾವು ಅದಕ್ಕೆ ಬೆಲೆಯನ್ನು ಕಟ್ಟಲಾಗದು. ಅಲ್ಲದೆ ನೀವು ನೀಡುವ ಮಾಹಿತಿಗಳಿಂದ ನಾವು ನಮ್ಮ ಕಂಪನಿಯ ಭವಿಷ್ಯದ ಮೌಲ್ಯಗಳನ್ನು ನಿರ್ಧರಿಸಲು ಸಹಾಯವಾಗುತ್ತದೆ.
ಈ ಸಮೀಕ್ಷೆಯ ಫಲಿತಾಂಶಗಳು ನಮ್ಮ ಮೌಲ್ಯ ನಿರ್ಧರಣೆಯ ಪ್ರಕ್ರಿಯೆಯ ಅಡಿಪಾಯವಾಗುತ್ತವೆ. ಫಲಿತಾಂಶಗಳನ್ನು ನಿಮಗೆ ತಲುಪಿಸಲು ನಾವು ಕಾತರರಾಗಿದ್ದೇವೆ.
ನೀವು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.
ಪ್ರೀತಿಪೂರ್ವಕವಾಗಿ,
ಡಾ| ಎರೆಕ್ ಸ್ಪೆಕರ್ಟ್